೨೦೦೫ ರ ಗುಜರಾತ್ ಪ್ರವಾಹವು ಮಳೆಗಾಲದ ಸಂದರ್ಭದಲ್ಲಿ ಭಾರತದ ಗುಜರಾತ್ ರಾಜ್ಯದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಿತು. ಇದರಲ್ಲಿ ಗುಜರಾತ್ ನ ೨೦ ಜಿಲ್ಲೆಗಳು (೩೩ರ ಪೈಕಿ) ಸೇರಿವೆ, ಅವುಗಳಲ್ಲಿ ೧೦ ಜಿಲ್ಲೆಗಳು ತೀವ್ರವಾಗಿ ತೊಂದರೆಗೊಳಪಟ್ಟಿವೆ. ೨೨೫ ತಾಲ್ಲೂಕುಗಳ ಪೈಕಿ ೧೧೭ ( ತಹಸಿಲ್‌ಗಳಲ್ಲಿ ಅಥವಾ ಮಂಡಲಗಳು), ೧೧ ನಗರಗಳು ಮತ್ತು ೭೨೦೦ ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ಸಿಲುಕಿದ್ದು, ಸುಮಾರು ೧೦,೦೦೦ಗಳವರೆಗೆ ಅನಾಹುತಕ್ಕೆ ಒಳಪಟ್ಟಿವೆ. ಒಟ್ಟಾರೆ ಸುರಿದ ೫೦೫ ಮಿ.ಮಿ.(೧೯.೯ಇಂಚು) ಮಳೆಯ ಪ್ರವಾಹದ ಸಮಯದಲ್ಲಿ ಸುಮಾರು ೧,೭೬,೦೦೦ ಜನರು ನಿರಾಶ್ರಿತರಾಗಿದ್ದು, ಗಿರ್ ವನ್ಯಜೀವಿಗಳ ಅಭಯಾರಣ್ಯದೊಳಗಿದ್ದ ಅಪರೂಪದ ಏಷ್ಯಾದ ಸಿಂಹವನ್ನೂ ಮುಳುಗಿಸಿದೆ . ಈ ಪ್ರವಾಹದಲ್ಲಿ ಕನಿಷ್ಠ ೧೭೩ ಜನರು ಸಾವನ್ನಪ್ಪಿದ್ದಾರೆ. ಪ್ರವಾಹದ ಭೀತಿಯಿಂದ ೧೧ ನಗರಗಳಾದ ವಡೋದರಾ, ನಾಡಿಯಾಡ್, ಅಹಮದಾಬಾದ್, ನವಸಾರಿ, ಸೂರತ್ ಮತ್ತು ಲಿಂಬಡಿ, ಡಾಕೋರ್, ಆನಂದ್, ಖೇಡಾ, ಪೆಟ್ಲಾಡ್ ಮತ್ತು ಬೊರ್ಸಾಡ್ ತೀವ್ರವಾಗಿ ಹಾನಿಗೊಳಗಾದವು. == ಬಾಹ್ಯ ಸಂಪರ್ಕ == . . [೧] ಹಿಂದು ನಾಸಾ ಭೂಮಿಯ ವೀಕ್ಷಣಾಲಯ ರಾಯಿಟರ್ಸ್ == ಉಲ್ಲೇಖಗಳು ==